ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಸುಮಾರು 1200 ವರ್ಷಗಳ ಇತಿಹಾಸ ಹೊಂದಿ ಜೀವಿಸುತ್ತಿರುವ
ಪ್ರಾಚೀನ ದ್ರಾವಿಡ ಮೂಲಭಾಷೆಗಳ ಉಪಭಾಷೆಯಲ್ಲೊಂದಾದ ‘ಬ್ಯಾರಿ’ ಭಾಷೆ ಆಧಾರಿತ ಸಮೃದ್ಧ
ಜೀವಿತ ಸಂಸ್ಕೃತಿ ಹೊಂದಿರುವ ಬ್ಯಾರಿ ಜನಾಂಗವು ತನ್ನ ಸುದೃಢ ಅಸ್ತಿತ್ವವನ್ನು ಹೊಂದಿ ಇಂದು
ಕರ್ನಾಟಕ ರಾಜ್ಯಾದ್ಯಂತ ತನ್ನ ಜನಸಂಖ್ಯೆಯನ್ನು 25 ಲಕ್ಷಕ್ಕಿಂತಲೂ ಕಡಿಮೆ ಇರದಂತೆ ವಾಸ ಹೊಂದಿ
ಜೀವನ ಪಾಲಿಸಿಕೊಂಡು ಬಂದಿದ್ದು, ಕರಾವಳಿ ಕರ್ನಾಟಕವಾದ ದ.ಕ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ
ಅಧಿಕವಾಗಿ ಜೀವಿಸುತ್ತಿದ್ದು. ರಾಜ್ಯದ ಇತರೆಡೆ ಗಣನೀಯ ಸಂಖ್ಯೆಯಲ್ಲಿ ಜೀವಿಸಿಕೊಂಡು ಬಂದಿರುತ್ತಾರೆ.
ಬ್ಯಾರಿ ಜನಾಂಗವು ಸಮಾಜದ ಮೂಲಸ್ಥರದಲ್ಲಿ ಆಳವಾದ ಚರಿತ್ರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ.
ಬ್ಯಾರಿ ಜನಾಂಗವು ತನ್ನ ಮೂಲದ್ರಾವಿಡ ಭಾಷಾ ಅಸ್ತಿತ್ವವನ್ನು ಸಮರ್ಪಕವಾಗಿ ಉಳಿಸಿ ಬೆಳೆಸಿ
ಸ೦ರಕ್ಷಿಸಿಕೊಂಡು ಬಂದಿದ್ದು, ಈ ನಾಡಿನ ಜನಪದ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕತೆ,
ಔದ್ಯೋಗಿಕ ರಂಗಕ್ಕೆ ಗಣನಾತ್ಮಕ ಕೊಡುಗೆ ನೀಡಿದೆ. ಬ್ಯಾರಿ ಭಾಷಾ ಸಂಭಾಷಿತ ಜನಾಂಗವು ಈ ನಾಡಿನ
ಧಾರ್ಮಿಕ ಆಚರಣೆಗಳನ್ನು ಮೀರಿ, ತನ್ನ ಬ್ಯಾರಿ ಭಾಷಾ ಸಂವಹನದ ಮೂಲಕ ವಿಭಿನ್ನ ಸಮುದಾಯದ
ಮಧ್ಯೆ ಸೌಹಾರ್ದತಾ ಜೀವನವನ್ನು ಅನಾದಿಕಾಲದಿಂದ ಪಾಲಿಸುತ್ತಾ ಬಂದಿದ್ದು, ಈ ಭಾಷೆಯು
ಸಾಮಾಜಿಕ-ಜೀವಿತ ಶೈಲಿಯೊಂದಿಗೆ ಬಲವಾಗಿ ಬೆರೆತುಕೊಂಡಿದೆ.
ಆದುದರಿಂದಲೇ ಬ್ಯಾರಿ ಸಂಭಾಷಿತ ಜನಾಂಗವು ಇಂದು ರಾಜ್ಯ-ದೇಶೀಯ ಮತ್ತು
ಅಂತರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆ ಗುರುತಿಸುವಿಕೆಗೆ ಕಾರಣವಾಗಿರುತ್ತದೆ. ಭೌಗೋಳಿಕವಾಗಿ ಬ್ಯಾರಿ
ಭಾಷಾ ಸಂಭಾಷಿತ ಸಮುದಾಯಕ್ಕೆ ಹಲವಾರು ದಶಕಗಳಿಂದ ದೇಶೀಯ ಆಡಳಿತವು ಸಕಾರಾತ್ಮಕವಾಗಿ
ಸ್ಪಂದಿಸಿ, ಈ ಜನಾಂಗದ ವಿಭಿನ್ನ ಗುರುತಿಸುವಿಕೆಯನ್ನು ಕಂಡಿದೆ.