ಕರ್ನಾಟಕದಲ್ಲಿ ಸುಮಾರು 25 ಲಕ್ಷ ಜನಸಂಖ್ಯಾಷ್ಟಿರುವ ಅಲ್ಪಸಂಖ್ಯಾತ ಬ್ಯಾರಿ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಸ್ಥಾಪನಗೊಂಡ ಸಂಘಟನೆ.
ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಸುಮಾರು 1200 ವರ್ಷಗಳಇತಿಹಾಸ ಹೊಂದಿ ಜೀವಿಸುತ್ತಿರುವ ಪ್ರಾಚೀನ ದ್ರಾವಿಡ ಮೂಲ ಭಾಷೆಗಳ ಉಪಭಾಷೆಯಲ್ಲೊಂದಾದ ಬ್ಯಾರಿ ಭಾಶಿತ ಜನಾಂಗ
ಬ್ಯಾರಿ ಸಾಹಿತ್ಯ ಮಹತ್ವವನ್ನು ಮನಗಂಡು ಬ್ಯಾರಿ ಭಾಷೆ ಉನ್ನತಿಗಾಗಿ ಕರ್ನಾಟಕ ಸರ್ಕಾರ ಸಂಸ್ಕೃತಿ ಇಲಾಖೆ ಅಧೀನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಮಂಜೂರು ಗೊಳಿಸಲಾಗಿದೆ.
ಬ್ಯಾರಿ ಜನಾಂಗೀಯ ವ್ಯಕ್ತಿಗಳ ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ, ಔದ್ಯೋಗಿಕ, ಶ್ರೆಯೋಭಿವೃದ್ಧಿಗಾಗಿ ಸರ್ಕಾರದ ವತಿಯಿಂದ ಕ್ರಿಯಾತ್ಮಕ, ರಚನಾತ್ಮಕ ಮತ್ತು ಆಡಳಿತಾತ್ಮಕ ಸಂಪನ್ಮೂಲ ಕ್ರೋಡೀಕರಣ ಮತ್ತು ನಿಧಿ ಪೂರೈಕೆಯ ಅಗತ್ಯತೆ.
ಜಾಗತಿಕವಾಗಿ ಸುಮಾರು 25 ಲಕ್ಷಕ್ಕಿಂತಲೂ ಅಧಿಕವಾಗಿರುವ ಬ್ಯಾರಿ ಜನಾಂಗದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಹೌದ್ಯೋಗಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಉದ್ದೇಶದಿಂದ ಕೆಲವು ಸಮಾನ ಮನಸ್ಕ ಬ್ಯಾರಿ ಜನಾಂಗೀಯ ಪ್ರಮುಖರು, ಚಿಂತಕರು, ಸಮಾನ ಮನಸ್ಕರು ಸೇರಿ ಅಖಿಲ ಭಾರತ ಬ್ಯಾರಿ ಮಹಾಸಭಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ.
ಬ್ಯಾರಿ ಜನಾಂಗವು ತನ್ನ ಮೂಲದ್ರಾವಿಡ ವೈಶಿಷ್ಟ್ಯತೆ ಅಸ್ತಿತ್ವವನ್ನು ಸಮರ್ಪಕವಾಗಿ ಉಳಿಸಿ ಬೆಳೆಸಿ ಸ೦ರಕ್ಷಿಸಿಕೊಂಡು ಬಂದಿದ್ದು, ಈ ನಾಡಿನ ಜನಪದ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕತೆ, ಔದ್ಯೋಗಿಕ ರಂಗಕ್ಕೆ ಗಣನಾತ್ಮಕ ಕೊಡುಗೆ ನೀಡಿದೆ. ಬ್ಯಾರಿ ಸಂಭಾಷಿತ ಜನಾ೦ಗವು ಈ ನಾಡಿನ ಧಾರ್ಮಿಕ ಆಚರಣೆಗಳನ್ನು ಮೀರಿ, ತನ್ನ ಬ್ಯಾರಿ ವೃತ್ತಿ ಸಂವಹನದ ಮೂಲಕ ವಿಭಿನ್ನ ಸಮುದಾಯದ ಮಧ್ಯೆ ಸೌಹಾರ್ದತಾ ಜೀವನವನ್ನು ಅನಾದಿಕಾಲದಿಂದ ಪಾಲಿಸುತ್ತಾ ಬಂದಿದ್ದು, ಈ ಜನಾಂಗವು ಸಾಮಾಜಿಕ-ಜೀವಿತ ಶೈಲಿಯೊಂದಿಗೆ ಬಲವಾಗಿ ಬೆರೆತುಕೊಂಡಿದೆ.ಆದುದರಿಂದಲೇ ಬ್ಯಾರಿ ಸಂಭಾಷಿತ ಜನಾಂಗವು ಇಂದು. ರಾಜ್ಯ-ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆ ಗುರುತಿಸುವಿಕೆಗೆ ಕಾರಣವಾಗಿರುತ್ತದೆ. ಭೌಗೋಳಿಕವಾಗಿ ಬ್ಯಾರಿ ಸಂಭಾಷಿತ ಸಮುದಾಯಕ್ಕೆ ಹಲವಾರು ದಶಕಗಳಿಂದ ದೇಶೀಯ ಆಡಳಿತವು ಸಕಾರಾತ್ಮಕವಾಗಿ ಸ್ಪಂದಿಸಿ, ಈ ಜನಾಂಗದ ವಿಭಿನ್ನ ಗುರುತಿಸುವಿಕೆಯನ್ನು ಕಂಡಿದೆ.
ಅತಿ ಸೂಕ್ಷ್ಮ ಅಲ್ಪಸಂಖ್ಯಾತ ಬ್ಯಾರಿ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಬಹುಉದ್ದೇಶಿತ ಧ್ಯೇಯೋದ್ದೇಶದೊಂದಿಗೆ ಕಟಿಬದ್ದ ಸಂಘಟನೆ
ಸಂಘಟನೆಯ ಕಾರ್ಯಯೋಜನೆಯ ಅನುಷ್ಠಾನತೆಯ ವರದಿಯ ನಿರೀಕ್ಷೆಯಲ್ಲಿ
ಸಂಘಟನೆಯ ಸಮಾಲೋಚನಾ ದೃಷ್ಟಿಕೋನದಲ್ಲಿ ಮೂಡಿ ಬಂದ ಪ್ರಮುಖರು