ಹಲವಾರು ವರ್ಷದ ಬೇಡಿಕೆಯ ನಂತರ, ಈ ಹಿಂದಿನ ಗೌರವಾನ್ವಿತ ಕರ್ನಾಟಕ ಸರಕಾರವು
ಬ್ಯಾರಿ ಸಾಹಿತ್ಯದ ಮಹತ್ವವನ್ನು ಮನಗಂಡು, ಬ್ಯಾರಿ ಭಾಷೆಯ ಉನ್ನತಿಗಾಗಿ ಕರ್ನಾಟಕ ಸಂಸ್ಕೃತಿ
ಇಲಾಖೆ ಅಧೀನದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಮಂಜೂರುಗೊಳಿಸಿದ್ದು.
ವಾರ್ಷಿಕವಾಗಿ ಸರಕಾರದ ಬಜೆಟ್‌ನಲ್ಲಿ ನಿಧಿ ಪೂರೈಕೆ ಮಾಡುತ್ತಿದೆ. ಈ ನಿಧಿಯು ಬ್ಯಾರಿ ಭಾಷೆಯ
ಅಭಿವೃದ್ಧಿಗೆ ಮಾತ್ರ ಸೀಮಿತವಾಗಿರುತ್ತದೆ.
ಪ್ರಸ್ತುತ ಕರ್ನಾಟಕದಲ್ಲಿರುವ 25 ಲಕ್ಷಕ್ಕಿಂತಲೂ ಕಡಿಮೆ ಇರದಂತೆ. ಜನಸಂಖ್ಯೆ ಇರುವ ಬ್ಯಾರಿ
ಭಾಷಿತರ ಸಮಗ್ರ ಔದ್ಯೋಗಿಕ, ಸಾಂಸ್ಕೃತಿಕ, ಸಾಮಾಜಿಕ, ಸಮುದಾಯಿಕ, ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ
ರಾಜ್ಯ ಯೋಜನಾ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ವೈಜ್ಞಾನಿಕ ಮಾರ್ಗದರ್ಶಿ ನಿಯಮಗಳನ್ನು
ರಚನೆಗೊಳಿಸಿ ಕರ್ನಾಟಕ ರಾಜ್ಯದ ವಾರ್ಷಿಕ ಯಾ. ಅರೆ-ವಾರ್ಷಿಕ ಬಜೆಟ್‌ನಲ್ಲಿ ಕನಿಷ್ಟ
ರೂಪಾಯಿ 200 ಕೋಟಿಗೆ
ಕಡಿಮೆ ಇರದಂತೆ ಹಣಕಾಸು ಮೀಸಲುಗೊಳಿಸಿ, ಆ ಮೂಲಕ ಸದ್ರಿ ನಿಧಿಯನ್ನು ಬ್ಯಾರಿ ಭಾಷಿತ ಜನರ
ಶ್ರೇಯೋಭಿವೃದ್ಧಿಗಾಗಿ ಪಾರದರ್ಶಕ ಇಲಾಖಾ ಆಡಳಿತದ ಮೂಲಕ ವ್ಯಯಿಸುವ ವ್ಯವಸ್ಥಿತ ರಚನಾತ್ಮಕ
ಮತ್ತು ಕ್ರಿಯಾತ್ಮಕ
ಕರ್ನಾಟಕ ಬ್ಯಾರಿ ಅಭಿವೃದ್ಧಿ ನಿಗಮ
ವನ್ನು ತಮ್ಮ ನೇತೃತ್ವದ ಘನ ಸರಕಾರದ ವತಿಯಿಂದ ಮಂಜೂರುಗೊಳಿಸಿ ಸ್ಥಾಪಿಸುವರೇ ಮತ್ತು
ಅನುಷ್ಠಾನಿಸುವರೇ ಈ ನಿಯೋಗ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರನ್ನು ವಿನಮ್ರವಾಗಿ
ಒತ್ತಾಯಿಸಿ ಆಗ್ರಹಿಸುತ್ತದೆ.